ನೀಲಿ - ಮತ್ತು - ಹಳದಿ ಟ್ಯಾನೇಜರ್ ( ರೌನಿಯಾ ಬೊನಾರಿಯೆನ್ಸಿಸ್ ), ಟ್ರೌಪಿಡೆ ಎಂಬ ಟ್ಯಾನೇಜರ್ ಕುಟುಂಬಕ್ಕೆ ಸೇರಿದ ಒಂದು ಜಾತಿಯ ಪಕ್ಷಿಯಾಗಿದೆ . ಇದು ಅರ್ಜೆಂಟೀನಾ, ಉರುಗ್ವೆ, ಬ್ರೆಜಿಲ್, ಪರಾಗ್ವೆ, ಬೊಲಿವಿಯಾ, ಉತ್ತರ ಚಿಲಿಯ ಗಡಿಭಾಗ, ಆಂಡಿಯನ್ ಪೆರು ಮತ್ತು ಈಕ್ವೆಡಾರ್‌ನಲ್ಲಿ ಕಂಡುಬರುತ್ತದೆ . ಕೆಲವು ದಕ್ಷಿಣ ಪ್ರದೇಶದಲ್ಲಿ ವಾಸಿಸುವ ಪಕ್ಷಿಗಳು ಆಸ್ಟ್ರಲ್ ಚಳಿಗಾಲದಲ್ಲಿ ಪೂರ್ವ ಬೊಲಿವಿಯಾ ಮತ್ತು ಈಶಾನ್ಯ ಅರ್ಜೆಂಟೀನಾ ಕಡೆಗೆ ವಲಸೆ ಹೋಗುತ್ತವೆ . ಇದರ ನೈಸರ್ಗಿಕ ಆವಾಸಸ್ಥಾನಗಳು ಎಂದರೆ ಉಪೋಷ್ಣವಲಯ ಅಥವಾ ಉಷ್ಣವಲಯದ ಒಣ ಅರಣ್ಯ, ತೇವಾಂಶವುಳ್ಳ ತಗ್ಗು ಅರಣ್ಯ, ಉಪೋಷ್ಣವಲಯದ ಅಥವಾ ತೇವಾಂಶವುಳ್ಳ ಮಲೆನಾಡಿನ ಕಾಡುಗಳು, ಉಪೋಷ್ಣವಲಯದ ಅಥವಾ ಎತ್ತರದ ಪೊದೆಸಸ್ಯ. ಅದರೆ ಇಂದು ಅತೀವವಾಗಿ ನಾಶವಾದ ಅರಣ್ಯಗಳಿಂದ ಇವು ಅಳಿವಿನ ಅಂಚಿನಲ್ಲಿರುವ ಪಕ್ಷಿಗಳಾಗಿವೆ. ಈ ಜಾತಿಯನ್ನು ಹಿಂದೆ ಥ್ರೌಪಿಸ್ ಕುಲಕ್ಕೆ ಸೇರಿಸಲಾಗಿತ್ತು. ೨೦೧೪ ರಲ್ಲಿ ಪ್ರಕಟವಾದ ಆಣ್ವಿಕ ಫೈಲೋಜೆನೆಟಿಕ್ ಅಧ್ಯಯನದ ಫಲಿತಾಂಶಗಳ ಆಧಾರದ ಮೇಲೆ ಇದನ್ನು ಪಿಪ್ರೈಡಿಯಾ ಕುಟುಂಬಕ್ಕೆ ಸ್ಥಳಾಂತರಿಸಲಾಯಿತು. ೨೦೨೦ ರಲ್ಲಿ ಪ್ರಕಟವಾದ ಅಧ್ಯಯನದ ಆಧಾರದ ಮೇಲೆ ಇದನ್ನು ರೌನಿಯಾಗೆ ಸ್ಥಳಾಂತರಿಸಲಾಯಿತು. ಆ ಕುಲದಲ್ಲಿ ಇದು ಏಕರೂಪವಾಗಿದೆ. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಇಂಟರ್ನೆಟ್ ಬರ್ಡ್ ಸಂಗ್ರಹಣೆಯಲ್ಲಿ ನೀಲಿ ಮತ್ತು ಹಳದಿ ಟ್ಯಾನೇಜರ್ ವೀಡಿಯೊಗಳು ಅಂಚೆಚೀಟಿಗಳು ( ಅರ್ಜೆಂಟೀನಾ, ಪರಾಗ್ವೆ, ಉರುಗ್ವೆಗೆ ) – ~ರೇಂಜ್‌ಮ್ಯಾಪ್‌ನೊಂದಿಗೆ ನೀಲಿ ಮತ್ತು ಹಳದಿ ಫೋಟೋ ಗ್ಯಾಲರಿ ಫೋಟೋ-ಹೈ ರೆಸ್--(ಕ್ಲೋಸ್-ಅಪ್) ಫೋಟೋ-ಹೈ ರೆಸ್ ; ಲೇಖನ-(ಒಳಗೊಂಡಿದೆ: ಇತರ ಹೆಸರು: "ಡಾರ್ವಿನ್ಸ್ ಟನೇಜರ್") – ಮ್ಯಾಂಗೋವರ್ಡೆ ಫೋಟೋ-ಹೈ ರೆಸ್